Home
About
Contact
SCRIBBLES
subscribe to heart to scribe something...
ಕತ್ತಲಲ್ಲಿ
ಕತ್ತಲಲ್ಲಿ ಅತ್ತಿತ್ತ ತಿರುಗುತ್ತ ಕಳೆದುಹೋಗಿದ್ದೇನೆ...
ಎಲ್ಲಿಂದ ಎಲ್ಲಿಗೋ ಬಂದಿದ್ದೇನೆ...
ಬಂದಿದ್ದು ಎಲ್ಲಿ ತಿಳಿಯುತ್ತಿಲ್ಲ ಕತ್ತಲಲ್ಲಿ...
ತಿಳಿದರೂ ಹೋಗಬೇಕಾದದ್ದು ಇನ್ನೆಲ್ಲಿ...
ಸುತ್ತಲಿನ ಸುಳಿವು ಕೂಡ ಸಿಗುತ್ತಿಲ್ಲ...
ಸಿಕ್ಕರೂ ಹೋಗುವುದೆಲ್ಲಿ ಈ ಮತ್ತಿನಲ್ಲಿ...
ಕಣ್ಣೀರ ಜಗಳ
ಬಾ ಎಂದಲ್ಲಿ ಬರದೇ, ಬರಬಾರದಲ್ಲಿ ಬಂದ
ಕಣ್ಣೀರೊಂದಿಗೆ ಜಗಳ ಮಾಡಬೇಕಿದೆ ಎನಗೆ
ಬಯ್ದು ಬಡಿದು ಕಣ್ಣೀರ ಕರೆಸಿ
ವಾದಿಸಿ ಗೆದ್ದು ಬೀರಬೇಕಿದೆ ನಗೆ...
ಕಳೆದುಹೋಗಿದ್ದೇನೆ
ಕಳೆದುಹೋಗಿದ್ದೇನೆ ಹುಡುಕಿ ಕೊಡಿ ನನ್ನನ್ನು
ನನ್ನ ಪರಿಚಯವ ನನಗೆ ಮಾಡಿಸಿ ಇನ್ನು
ಗುರುತೇ ಸಿಗದಷ್ಟು ಕಳೆದುಕೊಂಡಿದ್ದೇನೆ ತನ್ನತನವನ್ನು
ಸಿಗಲಿಕ್ಕಿಲ್ಲ ಬಿಡಿ ಏನಂತ ಹೇಳಲಿ ನನ್ನ ಗುರುತನ್ನು...
ಅಕ್ಷರಗಳು
ಅಕ್ಷರಶಃ ಅಕ್ಷರಗಳು ಒಂದನ್ನೊಂದು ಸಹಿಸುತ್ತಿಲ್ಲ
ಒಂದರ ಪಕ್ಕದಲ್ಲೊಂದು ಕೂರುತ್ತಿಲ್ಲ
ನನಗೇನೋ ಪೋಣಿಸಿ ಬರೆಯದೇ ಬೇರೆ ವಿಧಿಯಿಲ್ಲ
ಪೋಣಿಸಲು ಸೂಜಿ ಚುಚ್ಚುವ ಭಯ ಅವಕೆಲ್ಲ...
ಮಡಚಿಟ್ಟ ಪುಟ
ಮನಸೆಂಬ ಪುಸ್ತಕದಿ ಮಡಚಿಟ್ಟ ಪುಟವೊಂದು
ಮತ್ತೆ ಮತ್ತೆ ತೆರದು ನೋಡಿ ಮುಚ್ಚಿಟ್ಟ ಅನುಭವವಿಂದು...
ಕಾಣದೆ ಸುಪ್ತ ಮನದಲ್ಲಿ ಬಚ್ಚಿಟ್ಟ ಭಾವನೆಯೊಂದು
ತಿಳಿದೋ ತಿಳಿಯದೆ ಬಿಚ್ಚಿಟ್ಟ ಹಾಗಿದೆಯಿಂದು...
ಏನೆನ್ನಲಿ
ಅಂದೆ, ಒಳಗೊಳಗೆ ಸತ್ತು ಹೋಗಿದ್ದೇನೆ ಸುಟ್ಟು ಬಿಡು ನನ್ನ
ಏನೆನ್ನಲಿ, ಸುತ್ತ ಸುತ್ತಿ ಸ್ವತ್ತು ಮಾಡಿಕೊಳ್ಳಲು ಬಂದವಳನ್ನ...
ಸುತ್ತ ಗೋಡೆ ಕಟ್ಟಿಕೊಂಡ ಸಮಾಧಿಗೆ ಹಾಕಿ ಕನ್ನ
ಏನೆನ್ನಲಿ, ಹೊರತೆಗೆದು ಜೀವ ತುಂಬಿದವಳನ್ನ...